By

೨೦೧೪ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಜೆಎನ್‌ಎನ್‌ಯುಆರ್‌ಎಂ ಹಾಗೂ ರಾಜೀವ್ ಆವಾಜ್ ಯೋಜನೆ ಎಂಬ ಎರಡು ನಗರೀಕರಣ ಕಾರ್ಯಕ್ರಮಗಳು ಚಾಲನೆಯಲ್ಲಿದ್ದವು. ಕರ್ನಾಟಕ ಸೇರಿದಂತೆ ಇತರೇ ಎಲ್ಲಾ ರಾಜ್ಯಗಳಲ್ಲೂ ಈ ಕಾರ್ಯಕ್ರಮವನ್ನು ಏಕ ಕಾಲಕ್ಕೆ ಜಾರಿಗೊಳಿಸಲಾಗಿತ್ತು. ಆಗಿನ ಹೊಸ ಬಿಜೆಪಿ ಸರ್ಕಾರವು ಚಾಲ್ತಿಯಲ್ಲಿದ್ದ ಎಲ್ಲಾ ನಗರೀಕರಣ ಯೋಜನೆಗಳನ್ನು ನಿಲ್ಲಿಸಿ ಹೊಸ ಯೋಜನೆಗಳನ್ನು ಘೋಷಿಸಿದರು. ಅವು ಯಾವುವೆಂದರೇ ಪ್ರಧಾನ ಮಂತ್ರಿ ಆವಾಜ್ ಯೋಜನೆ(ಪಿಎಂಎವೈ) ಅಟಲ್ ಮಿಷನ್ ಫಾರ್ ರೆಜ್ಯೂವಿನೇಷನ್ ಅಂಡ್ ಹರ್ಬನ್ ಟ್ರಾನ್ಸ್ಫರ್ಮೆಷನ್(ಎಎಂಆರ್‌ಯುಟಿ) ಹಾಗೂ ಸ್ಮಾರ್ಟ್ ಸಿಟಿ ಮಿಷನ್(ಎಸ್‌ಸಿಎಂ) ಇದರಲ್ಲಿ ಕೊನೆಯ ಯೋಜನೆಯಾದ ಸ್ಮಾರ್ಟ್ ಸಿಟಿಯನ್ನು ಅತಿ ರಂಜಿತವಾಗಿ ಬಿಂಬಿಸಿ ಜಾರಿಗೊಳಿಸಲಾಯಿತು. ನೂರು ಸ್ಮಾರ್ಟ್ ಸಿಟಿಗಳಿಗೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಅನುದಾನವಾಗಿ ಘೋಷಿಸಲಾಗಿತ್ತು. ಇದಕ್ಕೆ ಮೊದಲೇ ಸ್ಮಾರ್ಟ್ ಸಿಟಿ ಯೋಜನೆಯ ಕುರಿತು ಉದ್ದಿಮೆಗಳು, ಶೈಕ್ಷಣಿಕ ವಲಯ ಹಾಗೂ ತಂತ್ರಜ್ಞಾನ ವಲಯಗಳಲ್ಲಿ ಈ ಯೋಜನೆಯ ಬಗ್ಗೆ ಪರ ವಿರೋಧದ ದೊಡ್ಡ ಚರ್ಚೆಯೇ ನಡೆಯಿತು. ೨೦೧೫ರಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿದ ಮೇಲೆ ಸಾರ್ವಜನಿಕ ವಲಯಗಳಲ್ಲೂ ಇದರ ಕುರಿತ ಚರ್ಚೆ ಶುರುವಾಯಿತು. ಈ ಯೋಜನೆಯ ಸಂಬಂಧಪಟ್ಟಂತೆ ಈ ರೀತಿಯ ವಿಭೃಂಜನೆಯ ಕಾರಣಕ್ಕೆ ಸಾರ್ವಜನಿಕರಲ್ಲಿ ಈ ಬಗ್ಗೆ ನಿರೀಕ್ಷೆಗಳು ಹೆಚ್ಚಾದವು. ಆದರೆ ಈ ಯೋಜನೆಯು ಯಾವುದೇ ರೀತಿಯಲ್ಲಿ ಒಂದು ಕರಾರು ಆದ ವ್ಯಾಖ್ಯಾಯನಕ್ಕೆ ಒಳಪಡಿಸಲಾಗಲಿಲ್ಲ. ಎಲ್ಲರೂ ಕೂಡಾ ಸ್ಮಾರ್ಟ್ ಸಿಟಿ ಪರಿಕಲ್ಪನೆಯನ್ನು ತಮ್ಮ ತಮ್ಮ ಅಗತ್ಯ ಮತ್ತು ನಿರೀಕ್ಷೆಗೆ ತಕ್ಕಂತೆ ವ್ಯಾಖ್ಯಾಯನಿಸುತ್ತಿದ್ದರು. ಈಗ ಈ ಯೋಜನೆಯು ಪ್ರಾರಂಭವಾಗಿ ೬ ವರ್ಷಗಳೇ ಕಳೆದಿರುವಾಗ ಈ ಯೋಜನೆಯು ಏನಾಗಿದೆ? ಈ ಬರಹವು ಸ್ಮಾರ್ಟ್ ಸಿಟಿ ಯೋಜನೆಯ ಪರಿಕಲ್ಪನೆ ಮತ್ತು ಜಾರಿಯ ಕುರಿತು ಸಾಮಾಜಿಕ ನ್ಯಾಯದ ದೃಷ್ಟಿಕೋನದಲ್ಲಿ ವಿಶ್ಲೇಷನೆಗೆ ಒಳಪಡಿಸುವ ಉದ್ದೇಶವನ್ನು ಹೊಂದಿದೆ. ಇದಕ್ಕೆ ತುಮಕೂರು ನಗರವನ್ನು ಉದಾಹರಣೆಯಾಗಿ ತೆಗೆದುಕೊಂಡು ಅಲ್ಲಿನ ಈ ಯೋಜನೆಯ ಜಾರಿಯನ್ನು ಆಳವಾದ ವಿಶ್ಲೇಷಣೆಗೆ ಒಳಪಡಿಸಲಾಗಿದೆ.

ದೇಶದಲ್ಲಿ ಅದುವರೆಗೂ ಜಾರಿಯಲ್ಲಿದ್ದ ನಗರ ಅಭಿವೃದ್ಧಿ ಯೋಜನೆಗಳಲ್ಲಿ ಇಲ್ಲದ ಹೊಸ ಆಯಾಮಗಳೊಂದಿಗೆ ಸ್ಮಾರ್ಟ್ ಸಿಟಿ ಯೋಜನೆಯನ್ನು ಪರಿಚಯಿಸಲಾಗಿತ್ತು. ಸಾಮಾನ್ಯವಾಗಿ ನಗರ ಅಭಿವೃದ್ಧಿ ಯೋಜನೆಗಳಿಗೆ ಆಯ್ಕೆಯಾಗುವ ನಗರಗಳನ್ನು ಕೆಲವು ಮಾನದಂಡಗಳನ್ನು ನಿಗಧಿಗೊಳಿಸಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ರಾಜ್ಯಗಳಿಗೆ ವಹಿಸಲಾಗುತ್ತಿತ್ತು. ಆದರೆ ಸ್ಮಾರ್ಟ್ ಸಿಟಿ ಯೋಜನೆಯನ್ನು ಎರಡು ಹಂತದ ಪೈಪೋಟಿ ವಿಧಾನದ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ಪರಿಚಯಿಸಲಾಯಿತು. ಪ್ರತಿ ರಾಜ್ಯಕ್ಕೆ ನಗರ ಜನಸಂಖ್ಯೆ ಹಾಗೂ ರಾಜ್ಯದಲ್ಲಿರುವ ನಗರಗಳು ಮತ್ತು ಪಟ್ಟಣಗಳ ಸಂಖ್ಯೆಯ ಆಧಾರಿತವಾಗಿ ನಿಗಧಿಗೊಳಿಸಿ ಇಂತಿಷ್ಟು ನಗರಗಳು ಎಂಬಂತೆ ರಾಜ್ಯಗಳಿಗೆ ವಹಿಸಲಾಯಿತು. ಅದರಲ್ಲಿ ಕರ್ನಾಟಕಕ್ಕೆ ೬ ನಗರಗಳನ್ನು ನಿಗಧಿಗೊಳಿಸಲಾಗಿತ್ತು. ಮೊದಲನೇ ಹಂತದಲ್ಲಿ ನಗರಗಳು ತಮ್ಮ ಮಧ್ಯೆ ಹಿಂದಿನ ಕಾರ್ಯ ನಿರ್ವಹಣೆ ಆಧಾರದಲ್ಲಿ ತಮ್ಮ ಮಧ್ಯೆ ಪೈಪೋಟಿಗೆ ಅವಕಾಶ ನೀಡಲಾಗಿತ್ತು. ಅದರಲ್ಲಿ ಗೆದ್ದ ನಗರಗಳನ್ನು ೨ನೇ ಹಂತದ ಆಯ್ಕೆಗೆ ಒಳಪಡಿಸಲಾಗಿತ್ತು. ಕರ್ನಾಟಕದಲ್ಲಿ ೧೧ ನಗರ ಪಾಲಿಕೆಗಳು ಮೊದಲನೇ ಹಂತದ ಆಯ್ಕೆಗೆ ಪೈಪೋಟಿ ನಡೆಸಿದವು. ಅದರಲ್ಲಿ ಬೆಳಗಾವಿ ಹುಬ್ಬಳ್ಳಿಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು ನಗರಗಳು ೨ನೇ ಹಂತಕ್ಕೆ ಆಯ್ಕೆಯಾದವು. ೨ನೇ ಹಂತದಲ್ಲಿ ಈ ಪ್ರತೀ ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯನ್ನು ಖಾಸಗೀ ಸಲಹೆಗಾರರ ಮೂಲಕ ತಯಾರಿಸಲು ಪ್ರತೀ ನಗರಕ್ಕೂ ೨ ಕೋಟಿ ರೂಪಾಯಿಗಳನ್ನು ನೀಡಲಾಯಿತು. ಒಕ್ಕೂಟದ ನಗರಾಭಿವೃದ್ಧಿ ಮಂತ್ರಾಲಯವು ಸರಿಯಾಗಿದ್ದಂಥ ಯೋಜನಾ ಪ್ರಸ್ತಾಪಗಳನ್ನು ಆಯ್ಕೆ ಮಾಡಿಕೊಂಡು ಉಳಿದವುಗಳನ್ನು ಪರಿಷ್ಕರಿಸಿ ೨ನೇ ಹಂತದ ಆಯ್ಕೆಗಾಗಿ ಸಲ್ಲಿಸಲು ಹೇಳಲಾಯಿತು. ಕರ್ನಾಟಕದಲ್ಲಿ ದಾವಣಗೆರೆ ಹಾಗೂ ಬೆಳಗಾವಿ ೨೦೧೬ರಲ್ಲಿ ಮೊದಲನೇ ಹಂತದಲ್ಲೇ ಆಯ್ಕೆಯಾದವು. ಹುಬ್ಬಳ್ಳಿ, ಧಾರವಾಡ, ತುಮಕೂರು, ಮಂಗಳೂರು ಎರಡನೇ ಹಂತದಲ್ಲಿ ಆಯ್ಕೆಯಾದವು. ಬೆಂಗಳೂರು ನಗರವು ರಾಜ್ಯ ಸರ್ಕಾರದ ಕೋರಿಕೆಯಂತೆ ೨೦೧೭ರಲ್ಲಿನ ೩ನೇ ಹಂತದಲ್ಲಿ ಆಯ್ಕೆ ಮಾಡಲಾಯಿತು.

ಈ ಆಯ್ಕೆ ಪ್ರಕ್ರಿಯೆ ಹೊರತಾಗಿ ಎನ್‌ಯುಆರ್‌ಎಂ ಹಾಗೂ ರಾಜೀವ್ ಅವಾಸ್ ಯೋಜನೆಯಲ್ಲಿ ಇಲ್ಲದಂಥ ಅನುಮೋದನೇ ನಿಯಮವನ್ನು ಪರಿಚಯಿಸಲಾಯಿತು. ಒಕ್ಕೂಟ ಸರ್ಕಾರವು ಮೊದಲನೇ ಸುತ್ತಿನ ಅನುಮೋದನೆಯನ್ನು ಮಾತ್ರ ನೀಡುವುದು ಉಳಿದಂತೆ ಸ್ಥಳೀಯ ಬದಲಾವಣೆಗಳು ತೀರ್ಮಾನಗಳನ್ನು ರಾಜ್ಯದ ಉನ್ನತ ಮಟ್ಟದ ಚಾಲನಾ ಸಮಿತಿಗೆ ವಹಿಸಲಾಯಿತು. ಈ ಯೋಜನೆಯ ನಿರ್ವಹಣೆ ಹಾಗೂ ಜಾರಿಯ ಸಂಬಂಧಿಸಿದಂತೆ ನಗರ ಮಟ್ಟದಲ್ಲಿ ಈ ಯೋಜನೆಗಾಗಿ ವಿಶೇಷ ಉದ್ದೇಶಿತ ವಾಹಕಗಳು (ಸ್ಪೆಷಲ್ ಪರ್ಪಸ್ ವೆಹಿಕಲ್) ಎಂಬ ಸಾರ್ವಜನಿಕ ಉದ್ಯಮಗಳನ್ನು ಸ್ಥಾಪಿಸಲಾಯಿತು. ಈ ಕಂಪನಿಯಲ್ಲಿ ಶೇ. ೫೦ರಷ್ಟು ಪಾಲು ರಾಜ್ಯ ಸರ್ಕಾರದ್ದು ಹಾಗೂ ಶೇ.೫೦ ರಷ್ಟು ಪಾಲು ನಗರ ಪಾಲಿಕೆಗಳದ್ದಾಗಿದೆ. ಮಾತ್ರವಲ್ಲದೆ ಈ ಕಂಪನಿಗೆ ನಗರ ಪಾಲಿಕೆಯ ಕಾಯ್ದೆಯಲ್ಲಿ ತಿದ್ದುಪಡಿ ತರುವ ಮೂಲಕ ಪಾಲಿಕೆಯ ಅಧಿಕಾರಗಳನ್ನು ಕಂಪನಿಗೆ ವರ್ಗಾಹಿಸಲಾಗಿದೆ. ಈ ಕಂಪನಿ ಸ್ಮಾರ್ಟ್ ಸಿಟಿ ಯೋಜನೆಯ ಎಲ್ಲಾ ಯೋಜನೆ ಹಾಗೂ ಉಪಯೋಜನೆಗಳ ಜಾರಿ ಅಧಿಕಾರವನ್ನು ಹೊಂದಿದೆ. ಸ್ಮಾರ್ಟ್ ಸಿಟಿ ಯೋಜನೆಯನ್ನು ಆ ಯೋಜನೆಯ ಮಾರ್ಗ ಸೂಚಿಗಳಂತೆ ನಗರ ನಾಗರೀಕರ ವ್ಯಾಪಕ ಸಮಾಲೋಚನೆಯ ಮೂಲಕ ರೂಪಿಸಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ನಗರ ಹಾಗೂ ನಾಗರೀಕರು ಅನ್ನುವ ಪದಗಳು ಒಂದು ಉದ್ದೇಶಿತ ಗುಂಪಿಗೆ ಸೀಮಿತವಾಗಿರುವುದನ್ನು ಇಲ್ಲಿ ಗಮನಿಸಬಹುದು. ಉದಾಹರಣೆಗೆ ನಗರದಲ್ಲಿರುವ ಅಸಮಾನ ಅಧಿಕಾರ ಸಂಬಂಧಗಳನ್ನು ಹಾಗೂ ನಾಗರೀಕರ ಜಾತಿ ವರ್ಗ ಲಿಂಗ ಆಧಾರಿತ ಅಮಾನತೆಗಳನ್ನು ಪರಿಗಣಿಸಲಾಗಲಿಲ್ಲ. ಎನ್‌ಯುಆರ್‌ಎಂ ಯೋಜನೆಯಲ್ಲಿ ನಗರ ವಂಚಿತ ಸಮುದಾಯಗಳಿಗೆ ವಿಶೇಷ ಉಪಯೋಜನೆಯನ್ನು ರೂಪಿಸಲಾಗಿತ್ತು. ಈ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರ ವಂಚಿತ ಸಮುದಾಯಗಳಿಗೆ ವಿಶೇಷ ಉಪಯೋಜನೆಯು ಇಲ್ಲ. ಸ್ಮಾರ್ಟ್ ಸಿಟಿ ಯೋಜನೆ ರೂಪಿಸುವಾಗಲೂ ಅದರ ಅಗತ್ಯತೆಯನ್ನು ಪರಿಗಣಿಸಲಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯ ರೂಪುರೇಷದಲ್ಲಿ ಆಯ್ದ ನಗರಗಳು ಪ್ರದೇಶ ಆಧಾರಿತ ಅಭಿವೃದ್ಧಿ ಹಾಗೂ ಸಂಪೂರ್ಣ ನಗರ ಅಭಿವೃದ್ಧಿ ಕುರಿತ ಎರಡು ಅಂಶಗಳನ್ನು ಮಾತ್ರ ಒಳಗೊಂಡಿತ್ತು. ಈ ಪ್ರದೇಶ ಆಧಾರಿತ ಅಭಿವೃದ್ಧಿ ಎಂಬುದು ಕೂಡಾ ಈ ಯೋಜನೆಯ ವಿಶೇಷಗಳಲ್ಲಿ ಒಂದು. ಸಂಪೂರ್ಣ ನಗರ ಅಭಿವೃದ್ಧಿಗೆ ಖರ್ಚು ಮಾಡುವ ಬದಲು ನಗರದಲ್ಲಿ ಒಂದು ಪ್ರದೇಶವನ್ನು ಮಾತ್ರ ಆಯ್ಕೆ ಮಾಡಿಕೊಂಡು ಈ ಸಂಪೂರ್ಣ ಹಣವನ್ನು ಅದರಲ್ಲಿ ಸುರಿಯುವ ಯೋಜನೆ ಇದಾಗಿದೆ. ನಗರದ ಅಭಿವೃದ್ಧಿ, ನಗರದ ಪುನರ್ ಅಭಿವೃದ್ಧಿ ಅಥವಾ ನಗರದ ವಿಸ್ತರಣೆ ಈ ಪ್ರದೇಶ ಆಧಾರಿತ ಅಭಿವೃದ್ಧಿಗೆ ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗಿದೆ. ಸಂಪೂರ್ಣ ನಗರ ವ್ಯಾಪ್ತಿಯ ಅಭಿವೃದ್ಧಿ ಯೋಜನೆಯಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಆಧ್ಯತೆ ನೀಡಲಾಗುವುದು. ಆದ್ದರಿಂದ ಈ ಯೋಜನೆಯಲ್ಲಿ ಒಳಪಡದೇ ಇರುವ ಜನರು ಕೂಡಾ ಇದರೊಂದಿಗೆ ಸಂಬಂಧ ಕಲ್ಪಿಸುವ ಉದ್ದೇಶ ಹೊಂದಿದೆ. ಈ ಯೋಜನೆಗಳಿಗೆ ಆರ್ಥಿಕ ಮೂಲವು ಸ್ಮಾರ್ಟ್ ಸಿಟಿ ಯೋಜನೆಯ ಹಣ ಸಾರ್ವಜನಿಕ ಖಾಸಗೀ ಸಹಭಾಗಿತ್ವದ ಜೊತೆಗೆ ರಾಜ್ಯ ಹಾಗೂ ಒಕ್ಕೂಟ ಸರ್ಕಾರದ ಯೋಜನೆಗಳ ಹಣವನ್ನು ಒಗ್ಗೂಡಿಸಿ ಕಾರ್ಯಗತಗೊಳಿಸಲಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯ ಕರ್ನಾಟಕದಲ್ಲಿನ ಇದುವರೆಗಿನ ಪ್ರಗತಿ

ಬೆಳಗಾವಿ ಹಾಗೂ ದಾವಣಗೆರೆ ನಗರಗಳು ೨೦೧೬ರಲ್ಲಿ ಆಯ್ಕೆಯಾಗಿ ಈಗ ೫ ವರ್ಷಗಳು ಕಳೆದಿವೆ. ಬೆಳಗಾವಿಯಲ್ಲಿ ಶೇ.೫೫.೮೬ ರಷ್ಟು ಹಾಗೂ ದಾವಣಗೆರೆಯಲ್ಲಿ ೨೯.೩ ರಷ್ಟು ಪ್ರಗತಿ ಸಾಧಿಸುತ್ತಾ ಇದುವರೆಗೂ ಕುಂಠಿತ ಗತಿಯಲ್ಲಿ ಸಾಗಿದೆ. ಯೋಜನೆಯ ಹಣಕಾಸು ಹಾಗೂ ಪೂರ್ಣಗೊಳಿಸುವಿಕೆ ಆಧಾರದಲ್ಲಿ ಬೆಳಗಾವಿ ಶೇ ೩೭.೭೯ ರಷ್ಟು ಹಾಗೂ ದಾವಣಗೆರೆ ಶೇ ೯.೦೮ ರಷ್ಟು ಪ್ರಗತಿ ಸಾಧಿಸಿದೆ. ಇದರಲ್ಲಿ ಸಣ್ಣ ಸಣ್ಣ ಯೋಜನೆಗಳು ಪೂರ್ಣಗೊಂಡಿವೆ. ದೊಡ್ಡ ಯೋಜನೆಗಳು ಕುಂಠುತ್ತಾ ಸಾಗಿವೆ. ಹುಬ್ಬಳ್ಳಿಧಾರವಾಡ, ಮಂಗಳೂರು, ಶಿವಮೊಗ್ಗ ಹಾಗೂ ತುಮಕೂರು ನಗರಗಳು ೨೦೨೨ಕ್ಕೆ ೫ ವರ್ಷಗಳನ್ನು ಪೂರೈಸಲಿದೆ. ಆದರೆ ಯೋಜನೆಯ ಜಾರಿಯಲ್ಲಿ ಹುಬ್ಬಳ್ಳಿಧಾರವಾಡ ೨೭.೪೦, ಮಂಗಳೂರು ೩೫.೭೧, ಶಿವಮೊಗ್ಗ ೪೬.೫೯ ಹಾಗೂ ತುಮಕೂರು ೫೩.೭೭ ರಷ್ಟು ಪ್ರಗತಿ ಸಾಧಿಸಿವೆ ಎಂದು ವರದಿ ಮಾಡಲಾಗಿದೆ. ಇದರಲ್ಲಿ ತುಮಕೂರು ನಗರ ಮಾತ್ರ ಶೇ.೫೦ಕ್ಕಿಂತ ಹೆಚ್ಚು ಪ್ರಗತಿಯನ್ನು ೪ ವರ್ಷಗಳಲ್ಲೇ ಸಾಧಿಸಿದೆ. ಯೋಜನೆಯ ಹಣಕಾಸು ವೆಚ್ಚದಲ್ಲಿ ಯಾವುದೇ ಪ್ರಗತಿ ಕಂಡು ಬರುತ್ತಿಲ್ಲ. ಉದಾಹರಣೆಗೆ ಹುಬ್ಬಳ್ಳಿಧಾರವಾಡದಲ್ಲಿ ೧೫.೩೩, ಮಂಗಳೂರಲ್ಲಿ ೪.೯೧, ಶಿವಮೊಗ್ಗದಲ್ಲಿ ೫.೫೮ ಹಾಗೂ ತುಮಕೂರು ನಗರವು ೧೨.೫೦ ಪ್ರಗತಿಯನ್ನು ಸಾಧಿಸಿವೆ. ಬೆಂಗಳೂರು ನಗರವು ೨೦೧೭ರಲ್ಲಿ ಆಯ್ಕೆಯಾಗಿದ್ದು ಈಗ ೩ ವರ್ಷಗಳು ಮುಗಿದಿದೆ. ಯೋಜನೆಯ ಜಾರಿ ಹಾಗೂ ಮುಕ್ತಾಯದ ಲೆಕ್ಕದಲ್ಲಿ ನೋಡುವುದೇ ಆದರೆ ಯೋಜನೆಯ ಆಯಾಮದಲ್ಲಿ ಶೇ. .೩೦, ಯೋಜನೆ ಹಣಕಾಸು ಆಯಾಮದಲ್ಲಿ ಶೇ. .೫೬ರಷ್ಟು ಪ್ರಗತಿ ಸಾಧಿಸಿದೆ. ಎಲ್ಲಾ ನಗರಗಳು ಕೂಡಾ ಈ ಅತಿ ವೇಗದ ಯೋಜನೆಯ ಗೆಡುವನ್ನು ಸಾಧಿಸುವ ಸಾಧ್ಯತೆ ಕಾಣುತ್ತಿಲ್ಲ.

ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ:

ತುಮಕೂರಿನ ಸ್ಮಾರ್ಟ್ ಸಿಟಿ ಯೋಜನಾ ವರದಿಯನ್ನು ನಗರದ ೩,೦೫,೮೨೧ ಜನಸಂಖ್ಯೆಯಲ್ಲಿ ೧,೭೫,೦೦೦ ಜನರ ಅಭಿಪ್ರಾಯವನ್ನು ಪಡೆದು ರೂಪಿಸಲಾಗಿದೆ ಎಂದು ಹೇಳಲಾಗಿದೆ. ಇದರ ಅರ್ಥ ನಗರ ಜನಸಂಖ್ಯೆಯಲ್ಲಿ ಅರ್ಧಕ್ಕೂ ಹೆಚ್ಚು ಜನರ ಅಭಿಪ್ರಾಯವನ್ನು ಪಡೆಯಲಾಗಿದೆ ಎಂದಾಗುತ್ತದೆ. ಆದರೆ ತುಮಕೂರು ನಗರದಲ್ಲಿ ನಾವು ಸಂದರ್ಶನ ಮಾಡಿದ ನಗರ ವಂಚಿತ ಸಮುದಾಯಗಳಾದ ಪೌರಕಾರ್ಮಿಕರು ಒಳಚರಂಡಿ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಜನರ ಸಂಘಟನೆಗಳು, ಕೊಳಗೇರಿಗಳು ಮುಂತಾದ ಕಡೆಗಳಲ್ಲಿ ಜನರಲ್ಲಿ ಯಾರೂ ಕೂಡಾ ಈ ಸ್ಮಾರ್ಟ್ ಸಿಟಿ ಯೋಜನಾ ರೂಪು ರೇಷದಲ್ಲಿ ಭಾಗಿಯಾಗಿಲ್ಲ. ಉದಾಹರಣೆಗೆ ಪೌರಕಾರ್ಮಿಕ ಸಂಘದ ನಾಯಕರಾದ ಶ್ರೀ ಕದಿರಪ್ಪನವರು ಹೇಳಿಕೆ ಹೀಗಿದೆ. “ನಾವೆಲ್ಲರೂ ಪಾಲಿಕೆಯಲ್ಲಿ ಕೆಲಸ ಮಾಡುವವರು. ಪ್ರತೀ ವಾರವು ನಾವು ಕಚೇರಿಗೆ ಹೋಗುತ್ತೇವೆ. ಆದರೆ ನಮ್ಮನ್ನ ಸ್ಮಾರ್ಟ್ ಸಿಟಿ ಯೋಜನೆಯ ಯಾವುದೇ ಸಮಾಲೋಚನೆಗೆ ಕರೆದಿಲ್ಲ. ಮೊದಲನೆ ಸಾರಿಗೆ ನಾವು ಸ್ಮಾರ್ಟ್ ಸಿಟಿ ಬಗ್ಗೆ ಕೇಳ್ಪಟ್ಟಿದ್ದು ನಮ್ಮ ಕಾರ್ಪೋರೇಷನ್ ಕಮಿಷನರ್‌ರವರಾದ ಶ್ರೀ ಟಿ.ಭೂಪಾಲನ್‌ರವರಿಗೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಎಂ.ಡಿಯಾಗಿ ಹೆಚ್ಚುವರಿ ಅಧಿಕಾರವನ್ನು ನೀಡಿದ ಮೇಲೆ ನಮಗೆ ಅದರ ಬಗ್ಗೆ ಗೊತ್ತಾಯಿತು.” ವಂಚಿತ ಸಮುದಾಯಗಳು ಈ ಯೋಜನೆ ಸಮಾಲೋಚನೆಯಿಂದ ಹೊರಗೆ ಉಳಿಯಲು ಪ್ರಮುಖ ಕಾರಣವೆಂದರೇ ಎಲ್ಲಾ ಸಮಾಲೋಚನೆಗಳು ಆನ್‌ಲೈನ್‌ನಲ್ಲಿ ನಡೆದಿದ್ದು. (ಕಾರ್ಪೋರೇಷನ್ ವೆಬ್‌ಸೈಟ್, ಮೇಲ್, ಫೇಸ್‌ಬುಕ್, ಮೈ ಗರ‍್ಮೆಂಟ್.ಇನ್ ವೆಬ್‌ಸೈಟ್, ಟ್ವಿಟರ್, ಯೂಟ್ಯೂಬ್ ಮುಂತಾದವು) ಮತ್ತು ಸರ್ಕಾರದವತಿಯಿಂದ ತುಮಕೂರು ನಗರವು ಸ್ಮಾರ್ಟ್ ಸಿಟಿಯ ಎರಡನೇ ಹಂತಕ್ಕೆ ಆಯ್ಕೆಯಾಗಿದೆ ಎಂಬಂತೆ ಏಕ ಮುಖ ಸಂಪರ್ಕವಾಗಿತ್ತು. ಯೋಜನಾ ವರದಿ ರೂಪಿಸಿದ ಮೇಲೆ ಅದನ್ನು ಮಂಡಿಸಿದ್ದು ಬರೀ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಮಾತ್ರ. ಸ್ಮಾರ್ಟ್ ಸಿಟಿಯ ದೃಷ್ಟಿಕೋನ ಸಂಬಂಧಪಟ್ಟ ಹೇಳಿಕೆಯಲ್ಲಿ ಕೆಐಎನ್‌ಡಿ ಎಂಬ ಪರಿಭಾಷೆಯನ್ನು ಸೂಚಿಸಲಾಗಿದೆ. ಇದರ ಅರ್ಥ ಜ್ಞಾನ ಹಾಗೂ ಕೈಗಾರಿಕೆಯ ಹೊಸ ಕೇಂದ್ರ (ನ್ಯಾಲೇಜ್ ಅಂಡ್ ಇಂಡಸ್ಟಿçಯಲ್ ನ್ಯೂ ಡಿಸ್ಟಿçನೇಷನ್) ಎಂಬುದನ್ನು ಸೂಚಿಸಿದ್ದು, ವಿಶ್ವ ವಿದ್ಯಾಲಯದ ಉಪ ಕುಲಪತಿಯವರು. ಮೊದಲನೇ ಹಂತದಲ್ಲಿ ನಾಗರೀಕರ ಅಭಿಪ್ರಾಯಗಳನ್ನು ಪಡೆಯಲು ಸಮೀಕ್ಷೆ ಹಾಗೂ ಸಭೆಗಳನ್ನು ನಡೆಸಲಾಯಿತು. ಅದರಲ್ಲಿ ಶೇ.೩ ರಷ್ಟು ಮಾತ್ರ ಸ್ಲಂ ನಿವಾಸಿಗಳು ಭಾಗವಹಿಸಿದ್ದರು. ಉಳಿದವರು ಉದ್ಯಮಿ ಸಂಘಗಳು ಧಾರ್ಮಿಕ ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮುಂತಾದವು. ನಗರ ವಂಚಿತ ಸಮುದಾಯಗಳ ಸೀಮಿತ ಭಾಗವಹಿಸುವಿಕೆಯ ಕಾರಣಕ್ಕೆ ಇಡೀ ಯೋಜನೆಯು ಮಧ್ಯಮ ವರ್ಗದ ಪಕ್ಷಪಾತಿ ಧೋರಣೆಗೆ ಕಾರಣವಾಯಿತು. ವಿದ್ಯುಚ್ಛಕ್ತಿಯ ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆಯೇ ಮೊದಲನೇ ಸಮಸ್ಯೆಯಾಗಿ ಗುರುತಿಸಲಾಯಿತು. ಯಾಕೆಂದರೇ ಭಾಗವಹಿಸಿದ ಬಹುಪಾಲು ಜನ ಅದನ್ನೇ ಪ್ರಮುಖ ಸಮಸ್ಯೆಯೆಂದು ಹೇಳಿದ್ದು. ಮುಂದುವರೆದು ಕಸ ಸಂಗ್ರಹ, ಚರಂಡಿ ಪಾದಚಾರಿ ಮಾರ್ಗಗಳು ವಾಹನ ನಿಲುಗಡೆ ನಗರದ ಪ್ರಮುಖ ಸಮಸ್ಯೆಯೆಂದು ಗುರುತಿಸಲಾಯಿತು. ಬಡವರಿಗೆ ಮನೆಗಳು, ಆರೋಗ್ಯ ಮೂಲ ಸೌಕರ್ಯ, ಬೀದಿ ವ್ಯಾಪಾರದ ಸ್ಥಳಗಳು ಆಟೋ ನಿಲುಗಡೆ ಮುಂತಾದವು ಈ ಯೋಜನೆಯಲ್ಲಿ ವಿಷಯವೇ ಆಗಿರಲಿಲ್ಲ. ಆದರೆ ಮೂಲಭೂತ ಸೌಲಭ್ಯಗಳು ಹಾಗೂ ಮೂಲ ಸೌಕರ್ಯಗಳು ಇಲ್ಲದೇ ಇರುವುದರಿಂದ ಜನರಿಗೆ ಅತೃಪ್ತಿ ಇರುವುದು ಕಂಡು ಬಂದಿದ್ದರು, ನಗರದಲ್ಲಿರುವ ಎಲ್ಲಾ ಸಮುದಾಯಗಳಿಗೆ ಈ ಸೌಲಭ್ಯಗಳಲ್ಲಿ ಸಮ ಹಂಚಿಕೆ ಇಲ್ಲದಿದ್ದರು, ಈಗಿರುವ ಸೇವೆಗಳ ಗುಣಮಟ್ಟವನ್ನು ಉತ್ತಮಗೊಳಿಸಲು ಎಲ್ಲಾ ಸಮುದಾಯಗಳಿಂದಲೂ ಅಭಿಪ್ರಾಯ ಬಂದಿತ್ತು. ಇದರಲ್ಲಿ ನೀರು ಸರಬರಾಜು, ಚರಂಡಿ ವ್ಯವಸ್ಥೆ, ಕಸ ಸಂಗ್ರಹಣೆ ಇನ್ನು ತಲುಪದೇ ಇರುವ ಪ್ರದೇಶಗಳಿದ್ದರೂ ಅದರ ಸಂಬಂಧಪಟ್ಟಂತೆ ಯಾವುದೇ ಅಭಿಪ್ರಾಯ ವ್ಯಕ್ತವಾಗಿಲ್ಲ. ನಾಗರೀಕರಿಂದ ಬಂದ ಸಲಹೆಗಳಲ್ಲಿ ಸೌಕರ್ಯಗಳ ಉತ್ತಮೀಕರಣ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಮಾತ್ರ ಅಭಿಪ್ರಾಯಗಳು ಬಂದವು. ಈ ಯೋಜನೆಯಲ್ಲಿ ಸೀಮಿತ ಹಣಕಾಸು ಇರುವುದರಿಂದ ಪೂರ್ತಿ ನಗರವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗದಿದ್ದರೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಈ ಮೂಲಸೌಕರ್ಯಗಳು ತಲುಪದೇ ಇರುವ ಪ್ರದೇಶಗಳಿಗೆ ತಲುಪಿಸುವುದು ಆದ್ಯತೆಯಾಗಬೇಕಿತ್ತು. ಈ ಸೌಕರ್ಯಗಳು ನಗರದ ಎಲ್ಲೆಗಳಲ್ಲಿರುವ ಹಲವು ವಾರ್ಡ್ಗಳಿಗೆ ಈಗಲೂ ಮರಿಚಿಕೆಯಾಗಿದೆ.

ಆದರೆ ಪ್ರದೇಶ ಆಧಾರಿತ ಅಭಿವೃದ್ಧಿಯಲ್ಲಿ ಆಯ್ಕೆಯಾಗಿರುವ ಪ್ರದೇಶವು ನಗರದ ಕೇಂದ್ರ ಭಾಗದಲ್ಲಿದೆ.

  • ಹೆಚ್ಚುವರಿ ಅಭಿವೃದ್ಧಿ

  1. ರೈಲ್ವೆ ಸ್ಟೇಷನ್ ಪ್ರದೇಶ, ಟೌನ್‌ಹಾಲ್ ಪ್ರದೇಶ, ಕೇಂದ್ರ ಬಸ್ ನಿಲ್ದಾಣ, ಎಂಜಿ ರಸ್ತೆ ನಗರದ ಕೇಂದ್ರ ಭಾಗವಾಗಿ.

  • ಪುನರಾಭಿವೃದ್ಧಿ (‘ಕೊಳಗೇರಿಗಳು’)

  1. ಇಂದಿರಾ ಕಾಲೋನಿ, ಮರಳೂರು ದಿಣ್ಣೆ ಸ್ಲಂ

  2. ಎನ್‌ಆರ್ ಕಾಲೋನಿ ಸ್ಲಂ

  3. ಶಾಂತಿನಗರ ಸ್ಲಂ

  • ಹೆಚ್ಚುವರಿ ಅಭಿವೃದ್ಧಿ (ಬಡಾವಣೆಗಳು)

  1. ಜಯನಗರ ಪೂರ್ವ, ಮಾರುತಿನಗರ, ನಿರುಪತುಂಗಾ ಎಕ್ಸ್ಟೆನ್ಷಲ್, ಸಿದ್ಧರಾಮೇಶ್ವರ ಎಕ್ಸ್ಟೆನ್ಷಲ್, ಮಂಜುನಾಥನಗರ್, ಗೋಕುಲಾ ಎಕ್ಸ್ಟೆನ್ಷಲ್

  2. ಎಸ್‌ಎಸ್‌ಪುರಂ, ಎಸ್‌ಐಟಿ ಪ್ರದೇಶ

  3. ವಿದ್ಯಾನಗರ್, ನೃಪತುಂಗಾ ಎಕ್ಸ್ಟೆನ್ಷಲ್

ಮೇಲೆ ಕಾಣುವ ವಲಯಗಳಲ್ಲಿ ೧, ೪ ಮತ್ತು ೫ನೇ ವಲಯಗಳು ಜನರ ಅಭಿಪ್ರಾಯದ ಆಧಾರದಲ್ಲಿ ಆಯ್ಕೆಯಾಗಿ ಮತ್ತೆ ಅದಕ್ಕೆ ನಂತರ ನಡೆಸಿದ ಮತ ಚಲಾಯಿಸುವ ವಿಧಾನದಲ್ಲಿ ೧ ಹಾಗೂ ೫ನೇ ವಿಭಾಗಗಳು ಅಂತಿಮವಾಗಿ ಆಯ್ಕೆಯಾದವು. ಸ್ಲಂ ಪುನರಾಭಿವೃದ್ಧಿಗೆ ಆಯ್ಕೆಯಾದ ಪ್ರದೇಶಗಳು ತ್ವರಿತ ಮತ ಚಲಾವಣೆಯ ಆಧಾರದಲ್ಲಿ ನಡೆಸಲಾಗಿದ್ದು, ಮೊದಲನೇ ಹಂತದ ೧ ಮತ್ತು ೫ರ ವಲಯಗಳ ಸಂದರ್ಭದಲ್ಲೇ ನಡೆಸಲಾಗಿತ್ತು. ಆನ್‌ಲೈನ್‌ನಲ್ಲಿ ನಡೆದ ಮತ ಚಲಾವಣೆಯಲ್ಲಿ ೧೧೦೧ ಮತಗಳಲ್ಲಿ ೭೭.೬೩ರಷ್ಟು ಮತಗಳು ಈ ಆಯ್ಕೆಗೆ ಪೂರಕವಾಗಿದ್ದವು.

ಈ ನಾಗರೀಕರ ಭಾಗವಹಿಸುವಿಕೆಯಲ್ಲಿ ನಗರ ವಂಚಿತ ಸಮುದಾಯಗಳನ್ನು ಹೊರಗಿಟ್ಟ ಕಾರಣದಿಂದ ಅಂತಿಮವಾಗಿ ಸರ್ಕಾರವೇ ೩ ರಿಂದ ೫ನೇ ಸಂಖ್ಯೆಯ ಸ್ಲಂಗಳ ಆಯ್ಕೆಗೆ ಕಾರಣವಾದವು. ಅವರಿಗೆ ಇದರ ಹೊರತು ಪಡಿಸಿ ಬೇರೆ ಆಯ್ಕೆಗಳು ಇರಲಿಲ್ಲ. ಜೊತೆಗೆ ಸ್ಮಾರ್ಟ್ ಸಿಟಿ ಯೋಜನೆಯ ಕರಡನ್ನು ಶೀಘ್ರವೇ ಮುಗಿಸಬೇಕಿದ್ದು ಕಾರಣವಾಗಿದ್ದು.

ಕರ್ನಾಟಕದ ಸ್ಲಂ ಜನಾಂದೋಲನಾದ ಸಂಚಾಲಕರಾದ ಎ.ನರಸಿಂಹಮೂರ್ತಿಯವರ ನಾಗರೀಕರ ಭಾಗವಹಿಸುವಿಕೆಯ ಒಂದು ಕಾರ್ಯಗಾರದಲ್ಲಿ ಸಾಮಾಜಿಕ ನ್ಯಾಯ ಹಾಗೂ ನಗರ ವಂಚಿತ ಸಮುದಾಯಗಳು ಈ ಯೋಜನೆಯ ಆಧ್ಯತೆಯಾಗಬೇಕು ಎಂಬ ಮಾತುಗಳಿಗೆ ಯಾವುದೇ ಬೆಲೆ ಇರಲಿಲ್ಲ. ಅಂತಿಮವಾಗಿ ಸ್ಮಾರ್ಟ್ ಸಿಟಿ ಯೋಜನೆಯ ಅಂತಿಮ ಗುರಿ ರೂಪಿಸುವ ಜವಾಬ್ದಾರಿಯನ್ನು ಎ.ರವೀಂದ್ರರವರಂಥ ನಗರ ತಜ್ಞರು ಮಾಡಿ ಮುಗಿಸಿದ್ದರು.

ಮೊದಲು ಪ್ರಕಟವಾದದ್ದು ಸ್ಲಂ ಜಗತ್ತು ಮಾಸಪತ್ರಿಕೆಯಲ್ಲಿ.

Centre for Financial Accountability is now on Telegram. Click here to join our Telegram channel and stay tuned to the latest updates and insights on the economy and finance.

Your email address will not be published. Required fields are marked *

*